peperonity.net
Welcome, guest. You are not logged in.
Log in or join for free!
 
Stay logged in
Forgot login details?

Login
Stay logged in

For free!
Get started!

Text page


bold girl - Woman
kannada.info.peperonity.net

ಬೋಲ್ಡ್‌ನೆಸ್ ಸೌಂದರ್ಯದ ರಹಸ್ಯ

ವಿಜಯ ಕರ್ನಾಟಕ

ಅಪರಿಚಿತ ಹುಡುಗನೆದುರು ನಿಂತು ಪಟಪಟಾಂತ ಮಾತನಾಡುವ ಅವಳ ಮಾತಲ್ಲಿ ಆತ್ಮವಿಶ್ವಾಸ ಮಿಂಚುತ್ತದೆ. ಯಾರಿಗೋ ಅನ್ಯಾಯವಾದಾಗ ಅವರ ಪರ ನಿಂತು ಹೋರಾಡುತ್ತಳಲ್ಲ, ಅದು ಅವಳನ್ನು ಗಟ್ಟಿಗಿತ್ತಿಯ ಪಟ್ಟಕ್ಕೆ ಏರಿಸುತ್ತದೆ. ಹಿಂದೆ ಬಿದ್ದವನ ಕೆನ್ನೆಗೆ ಭಾರಿಸಿ ಅವಳು ಸಿಕ್ಕಾಪಟ್ಟೆ ಬೋಲ್ಡ್ ಅಂದೆನಿಸಿಕೊಳ್ಳುತ್ತಾಳೆ.

ಆದ್ರೆ ಈ ಬೋಲ್ಡ್ ಅನ್ನೋ ಲೆಬಲ್‌ನ ಹುಡುಗಿಯರನ್ನು ನೋಡುವ ರೀತಿಯಲ್ಲಿ ಮಾತ್ರ ಪುಟ್ಟದ್ದೊಂದು ಅನುಮಾನ, ಸಮಾಧಾನ ಸುಳಿದು ಹೋಗುತ್ತದೆ. ನಿಜವಾಗಿ ಬೋಲ್ಡ್ ಹುಡುಗಿಯರೆಂದರೆ ಕ್ಯಾರೆಕ್ಟರ್‌ಲೆಸ್ ಆಗುವುದೇ?

ಖಂಡಿತಾ ಅಲ್ಲ. ನೈತಿಕತೆ ಬಿಟ್ಟು ನಡೆಯುವವರು ಬೋಲ್ಡ್ ಹುಡುಗಿಯರೆಂದು ಸಾರಾಸಗಾಟಾಗಿ ಎಲ್ಲಾ ಬೋಲ್ಡ್ ಹುಡುಗಿಯರಿಗೆ ಅವಮಾನ ಮಾಡುವುದು ಸರಿಯಲ್ಲ. ಬೋಲ್ಡ್ ಆಗಿದ್ದ ಮಾತ್ರಕ್ಕೆ ಹುಡುಗಿಯರು ನಡತೆಗೆಟ್ಟಿರಬೇಕು ಎಂದೇನಿಲ್ಲ. ಬೋಲ್ಡ್ ಹುಡುಗಿಯರೆಂದರೆ ಸಾಮಾನ್ಯವಾಗಿ ತಮ್ಮ ಚಿಪ್ಪಿನೊಳಗಿಂದ ಹೊರ ಬಂದು ಮಾತನಾಡುವವರೇ ವಿನಾ ನೈತಿಕ ಮಾರ್ಗವನ್ನು ಬಿಟ್ಟವರು ಅಲ್ಲ.

ಸಾಮಾನ್ಯವಾಗಿ ಹುಡುಗಿಯರು ಕಪ್ಪೆ ಚಿಪ್ಪಿನೊಳಗೆ ಇರುತ್ತಾರೆ. ಹೆಚ್ಚು ಮಾತನಾಡುವುದಿಲ್ಲ, ಹೆಚ್ಚು ಎಲ್ಲರ ಜತೆ ಬೆರೆಯುವುದಿಲ್ಲ. ತಮ್ಮಷ್ಟಕ್ಕೇ ತಾವಿರುತ್ತಾರೆ ಮತ್ತು ಸಮಾನ ಮನಸ್ಕ ಗೆಳತಿಯರೊಡನೆಯೇ ಒಡನಾಡುತ್ತಾರೆ. ಹುಡುಗರನ್ನು ಮಾತನಾಡಿಸಲು ಸ್ವಲ್ಪ ಅಂಜುತ್ತಾರೆ ಮತ್ತು ಹುಡುಗರು ತಾವಾಗಿಯೇ ಮಾತನಾಡಿದರೆ ಬೆದರಿಯೇ ಉತ್ತರಿಸುತ್ತಾರೆ. ಆದರೆ ಈ ಮಿತಿಗಳನ್ನೆಲ್ಲಾ ಮೀರಿದವರೇ ಬೋಲ್ಡ್ ಹುಡುಗೀರು.

ಬೋಲ್ಡ್ ಅಂದ್ರೆ ಯಾರು?

ಬೋಲ್ಡ್‌ನೆಸ್ ಎನ್ನುವುದು ನಮ್ಮ ಮನಸ್ಸಿನೊಳಗೆ ಇದೆ. ನಾವು ಸಂಪ್ರದಾಯಕ್ಕೆ ವಿರುದ್ಧವಾಗಿ ಚಿಂತಿಸಿದಾಗ ಬೋಲ್ಡ್ ಆಗುತ್ತೇವೆ. ಮಂಗಳಗೌರಿಯಾಗಿ ಸೀರೆ ಉಟ್ಟುಕೊಂಡು ಅಥವಾ ಸಾಂಪ್ರದಾಯಿಕ ಉಡುಗೆ ತೊಟ್ಟುಕೊಂಡಿದ್ದ ಮಾತ್ರಕ್ಕೆ ಒಬ್ಬಾಕೆ ಬೋಲ್ಡ್ ಅಲ್ಲ ಎನ್ನಲು ಸಾಧ್ಯವಿಲ್ಲ. ಆಕೆಯ ವಿಚಾರಧಾರೆಯಿಂದ ಆಕೆ ಬೋಲ್ಡ್ ಎನಿಸಿಕೊಳ್ಳುತ್ತಾಳೆಯೇ ವಿನಾ ಕೇವಲ ಉಡುಗೆ ತೊಡುಗೆಯಿಂದಲ್ಲ.

ಸಾಮಾನ್ಯವಾಗಿ ಬೋಲ್ಡ್ ಹುಡುಗಿ ಅಂದ್ರೆ ಅವಳ ಕ್ಯಾರೆಕ್ಟರ್ ಬಗ್ಗೆ ಅನುಮಾನ ಪಡುತ್ತಾರೆ. ಹುಡುಗಿ ಸಿಕ್ಕಾಪಟ್ಟೆ ಮದು ಅಂದ್ರೂ ಅದನ್ನೇ ಟೀಕಿಸುತ್ತಾರೆ. ಮಾತು ಮಾತಿಗೂ ಅಳುಮೋರೆ ಮಾಡುವಾಕೆಯನ್ನು ಅಳುಮುಂಜಿ ಎಂದು ಹೀಯಾಳಿಸುತ್ತಾರೆ. ಮದು ಆಗಿರುವುದೇನೂ ತಪ್ಪಲ್ಲ. ಆದರೆ ಮದು ಸ್ವಭಾವದಲ್ಲಿ ಆಕೆ ಚಿಪ್ಪಿನೊಳಗೆ ಅಂಟಿಕೊಂಡು ಮತ್ತೊಬ್ಬರ ಆಸರೆಯಲ್ಲಿರಬಾರದು ಅಷ್ಟೆ. ಅರಳು ಹುರಿದಂತೆ ಪಟ ಪಟನೆ ಮಾತನಾಡಿ ತಮ್ಮ ಅಭಿಪ್ರಾಯಗಳನ್ನು ಖಡಾ ಖಂಡಿತವಾಗಿ ...
Next part ►


This page:




Help/FAQ | Terms | Imprint
Home People Pictures Videos Sites Blogs Chat
Top
.