peperonity.net
Welcome, guest. You are not logged in.
Log in or join for free!
 
Stay logged in
Forgot login details?

Login
Stay logged in

For free!
Get started!

Text page


img
kannada.info.peperonity.net

ಎಚ್ಚರ...ಐಸ್ ಕ್ರೀಮ್ 'ಕೊಕೇನ್' ನಂತಹ ಚಟವಾಗಿರಬಹುದು!

ವೆಬ್‌ದುನಿಯಾ

ಐಸ್ ಕ್ರೀಮ್ ಪ್ರಿಯರೆ, ಎಚ್ಚರ! ಬಾಯಲ್ಲಿ ನೀರೂರಿಸುವಂತಹ ಐಸ್ ಕ್ರೀಮ್ ಸೇವನೆ 'ಕೊಕೇನ್' ತರಹದ ಚಟವಾಗಿ ಪರಿಣಮಿಸುತ್ತದೆ ಎಂದು ಸಂಶೋಧಕರು ತಿಳಿಸಿದ್ದಾರೆ. ಐಸ್ ಕ್ರೀಮ್ ಮತ್ತು ಕೊಕೇನ್ ಒಂದೇ ರೀತಿಯ ಕಡುಬಯಕೆಯನ್ನು ಹುಟ್ಟಿಸುತ್ತದೆ ಎಂಬುದು ಸಂಶೋಧಕರ ಅಧ್ಯಯನದ ವರದಿ ಹೇಳುತ್ತದೆ. ಅತಿಯಾದ ಐಸ್ ಕ್ರೀಮ್ ಸೇವನೆಯಿಂದಾಗಿ ಮಧುಮೇಹ, ಹೃದಯ ಸಂಬಂಧಿ ಖಾಯಿಲೆಗಳಿಗೆ ಯೌವನದಲ್ಲಿಯೇ ತುತ್ತಾಗಬಹುದು ಎಂಬ ಆಘಾತಕಾರಿ ಮಾಹಿತಿಯನ್ನು ಹೊರಹಾಕಿದೆ.

ನಿಯಮಿತವಾಗಿ ಕೊಕೇನ್ ಬಳಸುವ ವ್ಯಕ್ತಿ ಮತ್ತು ಅದೇ ರೀತಿ ಐಸ್ ಕ್ರೀಮ್ ತಿನ್ನುವಂತಹ ವ್ಯಕ್ತಿಯ ಮೆದುಳಿನಲ್ಲಿನ ಎಡಭಾಗವು ಒಂದೇ ರೀತಿಯಲ್ಲಿ ಪ್ರತಿಕ್ರಿಯಿಸುತ್ತದೆ ಎಂದು ಒರೆಗಾನ್ ರಿಸರ್ಚ್ ಇನ್ಸ್ಟಿಟ್ಯೂಟ್ ತಂಡವು ತನ್ನ ಅಮೆರಿಕನ್ ಜರ್ನಲ್ ಆಫ್ ಕ್ಲಿನಿಕಲ್ ನ್ಯೂಟ್ರಿಷನ್‌ನಲ್ಲಿ ವರದಿ ಮಾಡಿದೆ.

ಹೊಸ ಅಧ್ಯಯನದ ಪ್ರಕಾರ ಕೆಲವು ಜನರು ಜಂಕ್ ಆಹಾರದ ವ್ಯಸನಿಗಳಾಗಬಹುದು ಎಂದು ಹಿಂದಿನ ಹೇಳಿಕೆಗಳನ್ನು ಸಮರ್ಥಿಸುವಂತೆ ತೋರುತ್ತದೆ ಎಂದು ಅಮೇರಿಕಾದ ಸಂಶೋಧಕರು ಹೇಳುತ್ತಾರೆ. ಅತಿಯಾದ ಐಸ್ ಕ್ರೀಮ್ ಸೇವನೆಯಿಂದಾಗಿ ರಕ್ತ ಒತ್ತಡ, ಮಧುಮೇಹ, ಹೃದಯ ಸಂಬಂಧಿ ಖಾಯಿಲೆಗಳಿಗೆ ಯೌವನದಲ್ಲಿಯೇ ತುತ್ತಾಗಬಹುದು ಎಂದು ಅಧ್ಯಯನದಿಂದ ತಿಳಿದು ಬಂದಿದೆ.

ಅತಿಯಾಗಿ ತಿನ್ನುವ ಚಟದಿಂದಾಗಿ ಹೆಚ್ಚಿನ ಕೊಬ್ಬಿನ ಅಥವಾ ಹೆಚ್ಚಿನ ಸಕ್ಕರೆ ಆಹಾರಗಳು ಮೆದುಳಿನ ಪ್ರತಿಕ್ರಿಯಲ್ಲಿ ಮಾನಸಿಕ ಆರೋಗ್ಯದಲ್ಲಿ ಕುಂಠಿತವನ್ನು ಕಾಣಬಹುದು ಎಂದು ಅಧ್ಯಯನದ ಸಹ-ಲೇಖಕರಾಗಿರುವ ಡಾ.ಕೈಲ್ ಬರ್ಗರ್ ವಿವರಿಸಿದ್ದಾರೆ.

ಐಸ್ ಕ್ರೀಮ್‌ ಅನ್ನು ಹೆಚ್ಚು ಪ್ರಮಾಣದಲ್ಲಿ ಸೇವಿಸುವುದರಿಂದ ಮಾದಕ ವಸ್ತುಗಳ ಸೇವನೆಯಿಂದುಂಟಾಗುವ ಆರೋಗ್ಯದ ಮೇಲುಂಟಾಗುವ ಪರಿಣಾಮಗಳಂತೆ ಇರುತ್ತದೆ.

ಐಸ್ ಕ್ರೀಮ್ ಸೇವನೆಯ ತೃಪ್ತಿ ಮಟ್ಟವು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಹೋಗುವುದರಿಂದ ಹೆಚ್ಚಿನ ಪ್ರಮಾಣದ ಕೊಬ್ಬಿನ ಪದಾರ್ಥವನ್ನು ಸೇವಿಸಿದಂತಾಗುತ್ತದೆ ಅಥವಾ ಹೆಚ್ಚನ ಸಕ್ಕರೆಯುಕ್ತ ಆಹಾರ ಪದಾರ್ಥಗಳು ಪದೇ ಪದೇ ಸೇವಿಸುವಂತೆ ಪ್ರೇರೇಪಿಸುತ್ತವೆ ಎಂದು ವರದಿ ಹೇಳಿದೆ.

ಈ ಅಧ್ಯಯನದಲ್ಲಿ 14 ರಿಂದ 16 ವಯಸ್ಸಿನ 150 ಕ್ಕೂ ಹೆಚ್ಚಿನ ಹದಿಹರೆಯದವರು ಭಾಗವಹಿಸಿದ್ದರು. ಅಧ್ಯಯನದಲ್ಲಿ ಅವರ ಆಹಾರ ಮತ್ತು ಆಹಾರ ತಿನಿಸುಗಳ ಬಗೆಗಿರುವಂತಹ ಕಡುಬಯಕೆಯನ್ನು ಪರೀಕ್ಷಿಸಲಾಯಿತು.

ಈ ಕುರಿತಂತೆ ಸಂಗ್ರಹಿಸಲಾದ ದತ್ತಾಂಶವು ಅತಿಯಾಗಿ ತಿನ್ನುವಂತಹ ಆಹಾರ ಮೆದುಳಿನಲ್ಲಿ ಮಾದಕ ...


This page:




Help/FAQ | Terms | Imprint
Home People Pictures Videos Sites Blogs Chat
Top
.