peperonity.net
Welcome, guest. You are not logged in.
Log in or join for free!
 
Stay logged in
Forgot login details?

Login
Stay logged in

For free!
Get started!

Text page


kannada.info.peperonity.net

'ಸಕಾರಾತ್ಮಕ ಚಿಂತನೆ' ಯಶಸ್ವಿ ಜೀವನದ ಕೀಲಿ ಕೈ

ವೆಬ್‌ದುನಿಯಾ

ನೇಹಾ ತಾನು ಮಾಡುವ ಪ್ರತಿಯೊಂದು ಕಾರ್ಯದಲ್ಲೂ ನಿರಾಶೆಯನ್ನೇ ಅನುಭವಿಸುತ್ತಿದ್ದಳು. ತಾನು ಏನು ಕೆಲಸ ಮಾಡಿದರೂ ಅದರ ಫಲಿತಾಂಶ ತುಂಬಾ ಕೆಟ್ಟದಾಗಿರುತ್ತದೆ ಎಂಬುದು ಅವಳಲ್ಲಿ ಮನೆ ಮಾಡಿತ್ತು. ಇದರಿಂದಾಗಿ ನಿರಾಶೆ, ಜಿಗುಪ್ಸೆ ಹತಾಶೆಯಿಂದ ಅವಳು ದಿನವಿಡೀ ಕೊರಗುತ್ತಿದ್ದಳು. ಇದು ಕೇವಲ ನೇಹಾಳ ವಿಚಾರ ಮಾತ್ರವಲ್ಲ. ಸಕಾರಾತ್ಮಕ ಅಥವಾ ಧನಾತ್ಮಕವಾಗಿ ಆಲೋಚಿಸದಿರುವುದು ನಮ್ಮ ಮಾನಸಿಕ ನೆಮ್ಮದಿಯನ್ನು ಕಂಗೆಡಿಸುತ್ತದೆ. ಒಬ್ಬ ವ್ಯಕ್ತಿ ತಾನು ಮಾಡುವ ಕಾರ್ಯದಲ್ಲಿ ಒಂದೆರಡು ಸಲ ಸೋಲೆಂಬ ನಿರಾಶೆಯನ್ನು ಅನುಭವಿಸಿದ್ದಲ್ಲಿ, ಪ್ರತಿ ಬಾರಿಯೂ ಅವನಿಗೆ ನಿರಾಶೆ ಕಟ್ಟಿಟ್ಟದ್ದು ಎಂಬ ಆಲೋಚನೆಯೇ ಯಶಸ್ಸಿನ ಹಾದಿಯನ್ನು ಮುಚ್ಚುತ್ತದೆ.

ಮಾನಸಿಕ ತಜ್ಞ ದಿನೇಶ್‌ ಹೇಳುವಂತೆ, ಸಕಾರಾತ್ಮಕ ಆಲೋಚನೆ ಎನ್ನುವುದು ನಮ್ಮ ಮಾನಸಿಕ ಮನೋಭಾವನೆಯಾಗಿದ್ದು ಮನಸ್ಸಿನ ಆಲೋಚನೆಗಳನ್ನು ಇದು ವ್ಯಕ್ತಪಡಿಸುತ್ತದೆ, ಸಕಾರಾತ್ಮಕ ಚಿಂತನೆಯನ್ನು ಪ್ರದರ್ಶಿಸುವ ಶಬ್ಧಗಳು ಮತ್ತು ಚಿತ್ರಗಳು ಯಶಸ್ಸಿನೆಡೆಗೆ ಕರೆದೊಯ್ಯುವಲ್ಲಿ ಸಹಕಾರಿ. ಇದೊಂದು ಮಾನಸಿಕ ಮನೋಭಾವವಾಗಿರುವುದರಿಂದ ಉತ್ತಮವಾಗಿರುವ ಮತ್ತು ಅನುಕೂಲಕರ ಫಲಿತಾಂಶಗಳನ್ನು ನಿರೀಕ್ಷಿಸುತ್ತದೆ. ಸಕಾರಾತ್ಮಕ ಮನಸ್ಸು ಸಂತೋಷ, ನೆಮ್ಮದಿ, ಆರೋಗ್ಯವನ್ನು ಮತ್ತು ಯಶಸ್ಸನ್ನು ಪ್ರತಿ ಸಂದರ್ಭದಲ್ಲಿ ಮತ್ತು ಕ್ರಿಯೆಯಲ್ಲಿ ಎದುರು ನೋಡುತ್ತದೆ.

ಮನಸ್ಸು ಏನನ್ನು ನಿರೀಕ್ಷಿಸುತ್ತದೆ ಅದನ್ನು ಹುಡುಕುವುದರಿಂದ ಯಾವಾಗಲೂ ಸಕಾರಾತ್ಮಕ ಆಲೋಚನೆ ನಮ್ಮನ್ನು ಸಂತೋಷವಾಗಿರಿಸುತ್ತದೆ.
ಪ್ರತಿಯೊಬ್ಬರೂ ಸಕಾರಾತ್ಮಕ ಚಿಂತನೆಯಲ್ಲಿ ನಂಬಿಕೆಯನ್ನಿಡುತ್ತಾರೆಂದಲ್ಲ. ಕೆಲವರು ಇದನ್ನು ವ್ಯರ್ಥವೆಂದು ನಂಬುವವರು ಇದ್ದಾರೆ, ಮತ್ತು ಇದನ್ನು ನಂಬುವವರ ಮೇಲೆ ಕೆಲವರು ತಮ್ಮ ಅಸಮಾಧಾನವನ್ನು ಪ್ರದರ್ಶಿಸುತ್ತಾರೆ.

ಸಕಾರಾತ್ಮಕ ಚಿಂತನೆಯನ್ನು ಇಷ್ಟಪಡುವ ಹೆಚ್ಚಿನವರಿಗೆ ಇದನ್ನು ಪರಿಣಾಮಕಾರಿಯಾಗಿ ಮಾಡಿ ಉತ್ತಮ ಫಲಿತಾಂಶಗಳನ್ನು ಪಡೆಯುವುದು ಹೇಗೆ ಎಂಬುದರ ಬಗ್ಗೆ ಅರಿವಿರುವುದಿಲ್ಲ. ಯಾರು ತುಂಬಾ ಚಿಂತೆಯಲ್ಲಿರುತ್ತಾರೋ, ಅವರಿಗೆ ಸಕಾರಾತ್ಮಕವಾಗಿ ಆಲೋಚಿಸಿ ಎಂಬ ಮಾತನ್ನು ಜನಸಾಮಾನ್ಯರು ಬಳಸುವುದನ್ನು ನಾವು ಕೇಳಿದ್ದೇವೆ. ಕೆಲವರು ಈ ಮಾತನ್ನು ಪರಿಣಾಮಕಾರಿಯಾಗಿ ತೆಗೆದುಕೊಳ್ಳುವುದಿಲ್ಲ, ಇದರರ್ಥವೇನೆಂದು ಹೆಚ್ಚಿನವರಿಗೆ ತಿಳಿದಿಲ್ಲ, ಇವುಗಳನ್ನು ಪ್ರಯೋಜನಕಾರಿಯಾಗಿ ಮತ್ತು ಪರಿಣಾಮಕಾರಿಯಾಗಿ ಅವರು ತೆಗೆದುಕೊಂಡಿಲ್ಲ. ಸಕಾರಾತ್ಮಕವಾಗಿ ಆಲೋಚಿಸಿ ಎಂಬುದರ ನಿಜವಾದ ಅರ್ಥವೇನೆಂದು ನಮ್ಮಲ್ಲಿ ಹೆಚ್ಚಿನವರಿಗೆ ತಿಳಿದಿಲ್ಲ.ಆದರೂ ಇದನ್ನು ನಂಬುವವರ ಸಂಖ್ಯೆ ಅಧಿಕವಾಗುತ್ತಿದೆ ಎಂಬುದು ಹಲವಾರು ಪುಸ್ತಕಗಳಿಂದ, ಅಧ್ಯಯನಗಳಿಂದ, ...
Next part ►


This page:




Help/FAQ | Terms | Imprint
Home People Pictures Videos Sites Blogs Chat
Top
.