peperonity.net
Welcome, guest. You are not logged in.
Log in or join for free!
 
Stay logged in
Forgot login details?

Login
Stay logged in

For free!
Get started!

Text page


fish pedicure
kannada.info.peperonity.net

ಫಿಶ್ ಪೆಡಿಕ್ಯೂರ್: ಹೊಸ ಚಿಕಿತ್ಸೆ

ವಿಜಯ ಕರ್ನಾಟಕ

ಸಿಟಿ ಮಹಿಳೆಯರು ಹಾಗೂ ಪುರುಷರು ಫಿಶ್ ಪೆಡಿಕ್ಯೂರ್‌ನತ್ತ ವಾಲುತ್ತಿದ್ದಾರೆ. ಹೌದು, ಪಾದಗಳನ್ನು ಶುಚಿಗೊಳಿಸುವ ಈ ಹೊಸ ವಿಧಾನದ ಮೊರೆ ಹೋಗುತ್ತಿದ್ದಾರೆ.

ಏನಿದು ಫಿಶ್ ಪೆಡಿಕ್ಯೂರ್?

ಫಿಶ್ ಪೆಡಿಕ್ಯೂರ್ ಕೂಡಾ ಚಿಕಿತ್ಸೆಯಲ್ಲಿ, ಅಕ್ವೇರಿಯಂ ಕೊಳದೊಳಗೆ 100 ಸಣ್ಣ ಕಪ್ಪು ಬಣ್ಣದ ಮೀನುಗಳನ್ನು ಹಾಕಲಾಗುತ್ತದೆ. ಅಕ್ವೇರಿಯಂ ಒಳಗೆ ಪಾದಗಳನ್ನಿಟ್ಟಾಗ ಪಾದಗಳಿಗೆ ಮೀನುಗಳು ಮುತ್ತಿಕ್ಕುತ್ತವೆ. ಪಾದದಲ್ಲಿರುವ ಸತ್ತ ಚರ್ಮಗಳನ್ನು ಅವುಗಳು ತಿನ್ನುತ್ತವೆ. ಇದರಿಂದ ಹೊಸ ಚರ್ಮ ಬೆಳೆಯವುದಕ್ಕೆ ಎಡೆ ಮಾಡಿಕೊಡುತ್ತವೆ. 15-30 ನಿಮಿಷಗಳ ಕಾಲ ಫಿಶ್ ಪೆಡಿಕ್ಯೂರ್ ಮಾಡಿಸಲಾಗುತ್ತದೆ. ನಂತರ ಪಾದವನ್ನು ಮಸಾಜ್ ಮಾಡುತ್ತಾರೆ. ಸ್ಕ್ರಬ್ ಮಾಡಿ ಮಾಯಿಶ್ಚರೈಸಿಂಗ್ ಮಾಡಲಾಗುತ್ತದೆ. ಇದರಿಂದ ಬೇಬಿ ಸಾಫ್ಟ್ ಸ್ಕಿನ್ ಪಡೆಯಬಹುದು. ಫಿಶ್ ಪೆಡಿಕ್ಯೂರ್ ಬಳಸಿದ ನೀರನ್ನು 5ಬಾರಿ ಫಿಲ್ಟರ್ ಮಾಡಲಾಗುತ್ತದೆ ಮತ್ತು ಪ್ರತಿ ಪೆಡಿಕ್ಯೂರ್ ನಂತರ ನೀರನ್ನು ಬದಲಾಯಿಸಲಾಗುತ್ತದೆ. ಕೆಲವೊಮ್ಮೆ ಮೀನುಗಳನ್ನು ಬದಲಾಯಿಸುತ್ತಾರೆ.

ಪ್ರಯೋಜನಗಳು

ಕಾಲಿನ ಶುಚಿತ್ವ ಹೆಚ್ಚುತ್ತದೆ. ಫಿಶ್ ಪೆಡಿಕ್ಯೂರ್‌ನಿಂದ ಪಾದದಲ್ಲಿನ ಸತ್ತ ಚರ್ಮ, ಬ್ಯಾಕ್ಟೀರಿಯಾಗಳನ್ನು ತೆಗೆದುಹಾಕುತ್ತದೆ. ಪಾದವನ್ನು ಶುಚಿಯಾಗಿರುವಂತೆ ನೋಡಿಕೊಳ್ಳುತ್ತದೆ.

ಫಿಶ್ ಪೆಡಿಕ್ಯೂರ್‌ಗೂ ಮುನ್ನ...

- ಪಾರ್ಲರ್‌ಗಳಲ್ಲಿ ಶುಚಿತ್ವ ಗಮನಿಸಿ.

- ಕಾಲಿನಲ್ಲಿ ಹಸಿ ಗಾಯಗಳಿದ್ದರೆ, ಫಿಶ್ ಪೆಡಿಕ್ಯೂರ್ ಮಾಡಿಸಿಕೊಳ್ಳಬೇಡಿ.

- ಫಿಶ್ ಪೆಡಿಕ್ಯೂರ್‌ಗೆ ಮುನ್ನ ಯಾವುದೇ ಕ್ರೀಂ ಅಥವಾ ಲೋಶನ್ ಹಚ್ಚಿಕೊಳ್ಳದಿರಿ.

- ವ್ಯಾಕ್ಸ್ ಮಾಡಿಸಿಕೊಂಡಿದ್ದಲ್ಲಿ ಒಂದು ದಿನದ ನಂತರ ಫಿಶ್ ಪೆಡಿಕ್ಯೂರ್ ಮಾಡಿಸಿಕೊಳ್ಳಿ.

ಪಾದಗಳಲ್ಲಿರುವ ಸತ್ತ ಚರ್ಮವನ್ನು ಮೀನುಗಳು ಕುಕ್ಕಿ ತಿನ್ನುತ್ತವೆ. ಇದರಿಂದ ಪಾದವು ಶುಚಿಗೊಳ್ಳುತ್ತದೆ. ಡಾಕ್ಟರ್ ಫಿಶ್‌ನ್ನು ಈ ಫಿಶ್ ಪೆಡಿಕ್ಯೂರ್‌ಗೆ ಬಳಸಿಕೊಳ್ಳಲಾಗುತ್ತಿದೆ. ಗಾರಾ ರುಫಾ ಅಥವಾ ನಸುಗೆಂಪು ಬಣ್ಣದ ಲಾಗ್ ಸಕ್ಕರ್ ಎಂದು ಕರೆಯಲ್ಪಡುವ ಮೀನುಗಳನ್ನು ಈ ಚಿಕಿತ್ಸೆಗೆ ಉಪಯೋಗಿಸಿಕೊಳ್ಳಲಾಗುತ್ತದೆ. ಇದನ್ನು ಕಂಗಲ್ ಫಿಶ್, ನಿಬ್ಬಲ್ ಫಿಶ್, ಡಾಕ್ಟರ್ ಫಿಶ್ ಎಂದೂ ಕರೆಯಲಾಗುತ್ತದೆ. ಈ ಮೀನುಗಳು ಟರ್ಕಿಯ ಸಣ್ಣ ಹಳ್ಳಿ ಕಂಗಲ್‌ನಲ್ಲಿ ಸಿಗುತ್ತವೆಯಾದ್ದರಿಂದ ಈ ಹೆಸರು ಬಂದಿದೆ. ಈ ಮೀನನ್ನು ಮೊದಲು ಟರ್ಕಿಯಲ್ಲಿ ಬಳಸಲಾಯಿತಂತೆ. ಮೀನುಗಳು ಪಾದಗಳಿಗೆ ಮುತ್ತಿಕ್ಕುವುದರಿಂದ ಸಂವೇದನ ಶೀಲ ಅನುಭವ ಸಿಗುತ್ತದೆ. ಮರಿ ಮೀನುಗಳಾಗಿರುವುದರಿಂದ ಮತ್ತು ಮೀನುಗಳಿಗೆ ...


This page:
Help/FAQ | Terms | Imprint
Home People Pictures Videos Sites Blogs Chat
Top
.