peperonity.net
Welcome, guest. You are not logged in.
Log in or join for free!
 
Stay logged in
Forgot login details?

Login
Stay logged in

For free!
Get started!

Text page


bath salt
kannada.info.peperonity.net

ಬಾತ್ ಸಾಲ್ಟ್ (ಸ್ನಾನದ ಲವಣಗಳು

ದೇಹಕ್ಕೆ ರಿಲಾಕ್ಸ್

ಈಗಿನ ಒತ್ತಡದ ಜೀವನದಿಂದ ಮನಸಿಗೆ ಹಾಗೂ ದಣಿದ ದೇಹಕ್ಕೆ ರಿಲಾಕ್ಸ್ ಸಿಗಲು ಜನರು ಏನೆಲ್ಲ ಕಸರತ್ತು ಮಾಡುತ್ತಿರುತ್ತಾರೆ. ಆ ಸಾಲಿಗೆ ಈಗ ಬಾತ್ ಸಾಲ್ಟ್ (ಸ್ನಾನದ ಲವಣಗಳು) ಸೇರಿದೆ. ನಿಮಗೇನಾದರೂ ನೋವು, ದಿನಪೂರ್ತಿ ನಿಂತುಕೊಂಡೇ ಕೆಲಸ ಮಾಡಿ ಕಾಲುಗಳಿಗೆ ಆಯಾಸವಾಗಿದ್ದರೆ ಅಥವಾ ಕುಳಿತುಕೊಂಡೇ ಕೆಲಸ ಮಾಡಿ ಬೆನ್ನು ಬಿಗಿಯಾದಂತಾದರೆ ಬಾತ್ ಸಾಲ್ಟ್ ನಿಮ್ಮೆಲ್ಲ ಒತ್ತಡ ಮತ್ತು ಉದ್ವೇಗವನ್ನು ಕಡಿಮೆಗೊಳಿಸುತ್ತದೆ.

ದಿನಪೂರ್ತಿ ಕೆಲಸ ಮಾಡಿ ತುಂಬಾ ಆಯಾಸವಾಗಿದ್ದರೆ, ಟಬ್‌ನಲ್ಲಿ ಬಾತ್ ಸಾಲ್ಟ್ ಹಾಕಿ ಕಾಲುಗಳನ್ನು ಅದರೊಳಗೆ ಇಟ್ಟರೆ ಮತ್ತೆ ಯಥಾಸ್ಥಿತಿಗೆ ಬರುತ್ತೀರಿ.

ಹಾಗಾದರೆ ಬಾತ್ ಸಾಲ್ಟ್ ಎಂದರೇನು?
ನೀರಿನಲ್ಲಿ ಕರಗುವ ವಸ್ತು ಇದು. ಸಾಮಾನ್ಯವಾಗಿ ಅಜೈವಿಕ ಅಥವಾ ಸಾವಯವದ ಘನ ವಸ್ತುವಾದ ಇದನ್ನು ಸ್ನಾನಕ್ಕೆ ಉಪಯೋಗವಾಗುವಂತೆ ತಯಾರಿಸಲಾಗಿದೆ.

ಇದರ ಬಳಕೆಯಿಂದಾಗುವ ಉಪಯೋಗ
ಈ ಬಾತ್ ಸಾಲ್ಟ್‌ನಿಂದ ನಿಮ್ಮ ತ್ವಚೆಗೆ ಬಹಳ ಉಪಯೋಗವಾಗುತ್ತದೆ. ನೈಸರ್ಗಿಕ ಅಥವಾ ಶುದ್ಧವಾದ ಇದರಲ್ಲಿ ಮಿನರಲ್ ಮತ್ತು ನ್ಯೂಟ್ರೀಷನ್ ಇದೆ. ಇದು ಚರ್ಮವನ್ನು ಮೃದು ಮತ್ತು ನಯವಾಗಿಸುತ್ತದೆ.

ಈ ಸಾಲ್ಟ್‌ನಲ್ಲಿ ಮ್ಯಾಗ್ನೀಷಿಯಂ, ಕ್ಯಾಲ್ಷಿಯಂ, ಪೊಟಾಷಿಯಂ, ಬ್ರೋಮೈಡ್ ಮತ್ತು ಸೋಡಿಯಂ ಇದೆ. ಈ ಮಿನರಲ್ಸ್‌ಗಳು ಚರ್ಮದ ರಂಧ್ರಗಳಲ್ಲಿ ಸುಲಭವಾಗಿ ಹೀರಿಕೊಳ್ಳುತ್ತದೆ ಮತ್ತು ಚರ್ಮವನ್ನು ಶುದ್ಧೀಕರಿಸುತ್ತದೆ ಹಾಗೂ ಕಾಂತಿಯನ್ನು ಹೆಚ್ಚಿಸುತ್ತದೆ.

ಮ್ಯಾಗ್ನೀಷಿಯಂ ಆಯಾಸ ಮತ್ತು ಒತ್ತಡವನ್ನು ಕಡಿಮೆ ಮಾಡಲು ಸಹಕಾರಿಯಾಗಿದೆ. ಕ್ಯಾಲ್ಷಿಯಂ ದೇಹದಲ್ಲಿರುವ ನೀರಿನಂಶವನ್ನು ಹಿಡಿದಿಡುತ್ತದೆ ಮತ್ತು ಮೂಳೆಗಳನ್ನು ಆರೋಗ್ಯಕರವಾಗಿಸುತ್ತದೆ. ಪೋಟಾಷಿಯಂ ಚರ್ಮದ ತೇವಾಂಶ ಮಟ್ಟವನ್ನು ಸಮತೋಲನವಾಗಿರಿಸುತ್ತದೆ. ಬ್ರೋಮೈಡ್ ದಣಿದ ಮತ್ತು ನೋಯುತ್ತಿರುವ ಸ್ನಾಯುಗಳಿಗೆ ಆರಾಮ ನೀಡುತ್ತದೆ. ಸೋಡಿಯಂ, ದೇಹದಲ್ಲಿ ದುಗ್ಧರಸವನ್ನು ಸ್ರವಿಸುವ ದ್ರವ ಸಮತೋಲವನ್ನು ನಿರ್ವಹಿಸುವ ಗಮನಾರ್ಹ ಪಾತ್ರವನ್ನು ಮಾಡುತ್ತದೆ.

'ಬಾತ್ ಸಾಲ್ಟ್ ಉದ್ವೇಗವನ್ನು ಶಮನಗೊಳಿಸುತ್ತದೆ ಮತ್ತು ಆಯಾಸವನ್ನು ತೆಗೆದು ಹಾಕುತ್ತದೆ. ದೇಹ ಮತ್ತು ಮನಸ್ಸಿಗೆ ವಿಶ್ರಾಂತಿ ನೀಡುತ್ತದೆ. ರಿಫ್ರೆಶ್ ಮಾಡುತ್ತದೆ' ಎನ್ನುತ್ತಾರೆ ಬ್ಯೂಟಿ ಎಕ್ಸ್‌ಪರ್ಟ್ ಶಹಜಹಾನ್ ಹುಸೇನ್

ಬಾತ್ ಸಾಲ್ಟ್ ಆಯ್ಕೆ ಮಾಡುವಾಗ ಅದು ನಿಮ್ಮ ಚರ್ಮಕ್ಕೆ ಹೊಂದಿಕೆಯಾಗುತ್ತದಾ ಎಂದು ನೋಡಿಕೊಳ್ಳಬೇಕು. ನಿಮ್ಮದು ಒಣ ತ್ವಚೆಯಾಗಿದ್ದರೆ ಬಾತ್ ಸಾಲ್ಟ್ ಉಪಯೋಗಿಸಿ. ಇದರಿಂದ ನಿಮ್ಮ ಚರ್ಮಕ್ಕೆ ಮಾಯಿಶ್ಚರ್ ಸಿಗುತ್ತದೆ. ಕಿತ್ತಳೆ ಅಥವಾ ಬಾದಾಮಿ ಅಂಶ ಇರುವ ಬಾತ್ ...
Next part ►


This page:
Help/FAQ | Terms | Imprint
Home People Pictures Videos Sites Blogs Chat
Top
.