peperonity.net
Welcome, guest. You are not logged in.
Log in or join for free!
 
Stay logged in
Forgot login details?

Login
Stay logged in

For free!
Get started!

Text page


kannada.info.peperonity.net

ದಪ್ಪಗಾಗಬೇಕೆ? ಹಾಗಾದರೆ ಇಲ್ಲಿ ಕೇಳಿ!

ವೆಬ್‌ದುನಿಯಾ

ತೆಳ್ಳಗಾಗುವುದು ಹೇಗೆ ಕಷ್ಟವೋ
ಹಾಗೆಯೇ ದಪ್ಪಗಾಗುವುದೂ ಕೂಡಾ.
ಬಹಳಷ್ಟು ಮಂದಿ ದಪ್ಪಗಾಗಬೇಕು ಎಂದು
ಏನೆಲ್ಲಾ ಸರ್ಕಸ್ ಮಾಡಿದರೂ ದಪ್ಪಗಾಗಲು
ಸಾಧ್ಯವಾಗುವುದಿಲ್ಲ ಎಂದು ಅಲವತ್ತುಕೊಳ್ಳುತ್ತಾರೆ.
ಮನಸ್ಸು ಮಾಡಿದರೆ ಖಂಡಿತ ದಪ್ಪಗಾಗಲು ಸಾಧ್ಯವಿದೆ.
ಆದರೆ ದಪ್ಪಗಾಗಲು ಯಾವುದೇ ಶಾರ್ಟ್‌ಕಟ್ ಮಾರ್ಗಗಳಿಲ್ಲ
ಎಂಬುದನ್ನು ಮೊದಲು ನೆನಪಿಟ್ಟುಕೊಳ್ಳಬೇಕು. ಅಷ್ಟೇ ಅಲ್ಲ,
ಅಷ್ಟೇ ಕಾಳಜಿ ಹಾಗೂ ತಾಳ್ಮೆಯೂ ಬೇಕು.
ಸರಿಯಾಗಿ ತಿನ್ನಿ:
ದಪ್ಪಗಾಗುವವರು ಮೊದಲು ಗಮನ ಹರಿಸಬೇಕಾಗಿದ್ದು
ತಿನ್ನುವುದರ ಮೇಲೆ. ದಿನವೂ ಆರೋಗ್ಯಕರ
ಆಹಾರವನ್ನೇ ಸೇವಿಸಿ. ದಿನಕ್ಕೆ ಮೂರು ಪರಿಪೂರ್ಣ
ಊಟ ಹಾಗೂ ಮೂರು ಉಪಹಾರದ ಮೂಲ
ಕ ಹೊಟ್ಟೆ ತುಂಬಿಸಿಕೊಳ್ಳಬೇಕು. ಆದರೆ ಊಟ ಹಾಗೂ
ಇನ್ನೊಂದು ಉಪಹಾರ (ತಿಂಡಿ)ಯ ನಡುವೆ
ಮೂರು ಗಂಟೆಗಳ ಅಂತರವಿರುವಂತೆ ನೋಡಿಕೊಳ್ಳಿ.
ಆಗ ನೀವು ತಿಂದ ಆಹಾರ ಸಂಪೂರ್ಣ
ಕರಗಲು ಅವಕಾಶ ನೀಡಿದಂತಾಗುತ್ತದೆ.
ಆದರೆ 5-6 ಗಂಟೆಗಳ ಕಾಲ
ಆಹಾರವೇ ಇಲ್ಲದೆ ಖಾಲಿ ಹೊಟ್ಟೆಯಲ್ಲಿ ಇರಬೇಡಿ.
ವ್ಯಾಯಾಮ ಮಾಡಿ:
ಪ್ರತಿದಿನವೂ ವ್ಯಾಯಾಮ ಮಾಡಿ.
ತೆಳ್ಳಗಾಗಲು ಹೇಗೆ ವ್ಯಾಯಾಮ ಮುಖ್ಯವೋ
ಹಾಗೆಯೇ ದಪ್ಪಗಾಗಲು ಕೂಡಾ.
ತೆಳ್ಳಗಿರುವವರು ಯಾವಾಗಲೂ ವ್ಯಾಯಾಮ
ಅವರಿಗೆ ಒಳ್ಳೆಯದಲ್ಲ ಎಂದು ತಿಳಿದಿರುತ್ತಾರೆ.
ಆದರೆ ಇದು ಶುದ್ಧ ಸುಳ್ಳು. ಬರೀ ತಿನ್ನುತ್ತಾ ಕೂತರೆ
ಖಂಡಿತಾ ಸಾಲದು. ನೀವು ದಪ್ಪಗಾಗಬೇಕು,
ಆದರೆ ಬೊಜ್ಜು ಬರಬಾರದು ಎಂಬ ಆಸೆ ನಿಮಗಿದ್ದರೆ
ಖಂಡಿತಾ ವ್ಯಾಯಾಮ ಮಾಡಿ.
ಆದರೆ, ತೂಕ ಹೆಚ್ಚಿಸಿಕೊಳ್ಳುವ ವ್ಯಾಯಾಮ,
ತೂಕ ಕಳೆದುಕೊಳ್ಳುವ ವ್ಯಾಯಾಮ ಎಂದು
ಎರಡು ವರ್ಗೀಕರಣವಿದೆ. ನೀವು ಮಾಡಿಕೊಳ್ಳಬೇಕಾದ್ದು
ತೂಕ ಹೆಚ್ಚಿಸಿಕೊಳ್ಳುವ ವ್ಯಾಯಾಮ.
ಅದಕ್ಕಾಗಿ ತಜ್ಞರನ್ನು ಸಂಪರ್ಕಿಸಿ.
ಅಥವಾ ವ್ಯಾಯಾಮ ಶಾಲೆಗಳನ್ನು ಸಂಪರ್ಕಿಸಿ.
ಪ್ರೊಟೀನ್ ಯುಕ್ತ ಆಹಾರ:
ನೀವು ವ್ಯಾಯಾಮ ಮಾಡುವಾಗ ನಿಮ್ಮ ದೇಹದಲ್ಲಿ
ಸಾಕಷ್ಟು ಅಮೈನೋ ಆಸಿಡ್ ಇರಬೇಕು.
ಇಲ್ಲವಾದರೆ ಮೂಳೆಗಳಿಗೆ ಪೆಟ್ಟಾಗುವ ಸಂಭವವಿದೆ.
ಅಮೈನೋ ಆಸಿಡ್ ನಿಮ್ಮ ದೇಹದಲ್ಲಿ ಸಂಗ್ರಹವಾಗಬೇಕೆಂದರೆ
ನೀವು ಉತ್ತಮ ಪ್ರೋಟೀನ್ ಯುಕ್ತ ಆಹಾರ ಪ್ರತಿನಿತ್ಯ ಸೇವಿಸಬೇಕು.
ದೇಹದಲ್ಲಿ ಉತ್ತಮ ಮಾಂಸಖಂಡಗಳು ವೃದ್ಧಿಯಾಗಬೇಕೆಂದರೆ
ಪ್ರೋಟೀನ್ ಯುಕ್ತ ಆಹಾರ ಮುಖ್ಯ. ನೀವು ನಿಮ್ಮ
ದೇಹಕ್ಕೆ ಅಗತ್ಯವಾದಷ್ಟು ಪ್ರೊಟೀನ್‌ಯುಕ್ತ ಆಹಾರ
ಸೇವಿಸದಿದ್ದರೆ ನೀವು ವ್ಯಾಯಾಮ ಮಾಡಿದರೂ
ಪ್ರಯೋಜನವಾಗುವುದಿಲ್ಲ. ಹಾಗಾಗಿ ನಿಮ್ಮ
ದೇಹಕ್ಕೆ ಎಷ್ಟು ಪ್ರೊಟೀನ್ ಬೇಕು ಎಂಬುದನ್ನು
ನೀವೇ ಲೆಕ್ಕಾಚಾರ ಹಾಕಿಗೊಳ್ಳಬೇಕು. ನೀವು
ಪ್ರತಿದಿನ 2.2 ಗ್ರಾಂ/ಕೆಜಿ ...


This page:




Help/FAQ | Terms | Imprint
Home People Pictures Videos Sites Blogs Chat
Top
.