peperonity.net
Welcome, guest. You are not logged in.
Log in or join for free!
 
Stay logged in
Forgot login details?

Login
Stay logged in

For free!
Get started!

Text page


free
kannada.info.peperonity.net

ಶುಂಠಿ, ನಿಜಕ್ಕೂ ಮಹಾ ಶುಂಠಿ !

ವೆಬ್‌ದುನಿಯಾ

ಶುಂಠಿ, ನಿಜಕ್ಕೂ ಮಹಾ ಶುಂಠಿ !
ಶುಂಠಿಯಲ್ಲಿರುವ ಚಿಕಿತ್ಸಕ ಗುಣ ಅತ್ಯಪಾರ. ಆದರ ಮಹತ್ವವನ್ನು ತಿಳಿದು ಬಳಸಿದರೆ ಆರೋಗ್ಯ ಭಾಗ್ಯ ಒದಗುವುದರಲ್ಲಿ ಸಂಶಯವೇ ಇಲ್ಲ !
ಅರ್ಧ ಲೋಟ ಬಿಸಿ ನೀರಿಗೆ ಶುಂಠಿ ರಸ, ಬೆಲ್ಲ ಬೆರೆಸಿ ಕಲಸಿ ಬೆಳಗ್ಗೆ ಮತ್ತು ರಾತ್ರಿ ಮೂರು ದಿನಗಳ ಕಾಲ ಕುಡಿದರೆ ನೆಗಡಿ ನಿವಾರಣೆಯಾಗುತ್ತದೆ.
ಶುಂಠಿ, ಹಿಪ್ಪಲಿ, ಕಾಳು ಮೆಣಸು ಮತ್ತು ತುಳಸಿ ಇವುಗಳನ್ನು ತಲಾ ಐದು ಗ್ರಾಂನಂತೆ ತೆಗೆದುಕೊಮಡು ಪುಡಿ ಮಾಡಿ ಅರ್ಧ ಲೋಟ ನೀರಿಗೆ ಹಾಕಿ ಕುದಿಸಬೇಕು. ಅದು ಅರ್ಧ ಭಾಗಕ್ಕೆ ಇಳಿದ ಮೇಲೆಬೆಲ್ಲ ಹಾಲು ಬೆರೆಸಿ ಶೋಧಿಸಿ ದಿನಕ್ಕೆ ಎರಡು ಬಾರಿ ಕುಡಿಯುವುದರಿಂದ ನೆಗಡಿ ನಿವಾರಣೆಯಾಗುವುದು.
ಶುಂಠಿ, ಮೆಣಸಿನ ಕಾಳು, ಹಿಪ್ಪಲಿಗಳನ್ನು ಪುಡಿಮಾಡಿಟ್ಟುಕೊಂಡು ದಿನಕ್ಕೆರಡು ಬಾರಿ ಜೇನುತುಪ್ಪದೊಂದಿಗೆ ಸೇವಿಸುವುದರಿಂದ ಗಂಟಲು ನೋವು ನಿವಾರಣೆಯಾಗುತ್ತದೆ.
ಒಂದು ಚಮಚೆ ಹಸಿಶುಂಠಿ ರಸಕ್ಕೆ ಒಂದು ಚಮಚೆ ಜೇನುತುಪ್ಪ ಬೆರೆಸಿ ಒಂದರಿಂದ ಎರಡು ಚಮಚೆಯಷ್ಟು ದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ ವಾಂತಿ ನಿಂತುಹೊಗುತ್ತದೆ.
ಒಂದು ಸ್ಪೂನ್‌ ಹಸಿ ಶುಂಠಿ ರಸಕ್ಕೆ ಅರ್ಧ ಸ್ಪೂನ್‌ ಜೇನುತುಪ್ಪ ಸೇರಿಸಿ ಸೇವಿಸಿದರೆ ಕೆಮ್ಮು, ಕಫ‌, ಉಬ್ಬಸ ಕಡಿಮೆಯಾಗುತ್ತದೆ.
ಶುಂಠಿ, ಹುರುಳಿ, ನೆಲಗುಳ್ಳ, ಆಡುಸೋಗೆಗಳನ್ನು ಸಮಪ್ರಮಾಣದಲ್ಲಿ ತೆಗೆದುಕೊಂಡು ಪುಡಿಮಾಡಿ ಕಷಾಯ ಮಾಡಿಕೊಂಡು ಕುಡಿಯುತ್ತಿದ್ದರೆ ಉಬ್ಬಸ ರೋಗ ಕಡಿಮೆಯಾಗುತ್ತದೆ.
ಶುಂಠಿ, ಹಿಪ್ಪಲಿ, ಕಾಳು ಮೆಣಸುಗಳನ್ನು ಪುಡಿ ಮಾಡಿಕೊಂಡು ಅದಕ್ಕೆ ಜೇನುತುಪ್ಪ ಸೇರಿಸಿ ಸೇವಿಸುತ್ತಿದ್ದರೆ ಉಬ್ಬಸ ರೋಗ ಉಪಶಮನಕ್ಕೆ ಬರುತ್ತದೆ.
...........
............
............
...........
ಕೊಲೆಸ್ಟರಾಲ್‌ ನಿಯಂತ್ರಣಕ್ಕಾಗಿ
............
.............
.ಮೆಂತ್ಯೆಯನ್ನು ಹುರಿದು ಪುಡಿ ಮಾಡಿ ಬೆಳಗ್ಗೆ ಅಥವಾ ಮಧ್ಯಾಹ್ನ ಆಹಾರಕ್ಕೆ ಮೊದಲು ಬಿಸಿನೀರಿನಲ್ಲಿ ಅಥವಾ ಮಜ್ಜಿಗೆಯಲ್ಲಿ ಕದಡಿ ಕೊಡಿ. ಪ್ರಮಾಣ 1/2 - 1 1/2 ಚಮಚ.
.ಬೆಳ್ಳುಳ್ಳಿಯನ್ನು ಕಾವಲಿಯಲ್ಲಿ ಎಣ್ಣೆ ಹಾಕದೇ ಹುರಿದಿಡಿ. ದಿನಕ್ಕೆ 4-6 ಬೆಳ್ಳುಳ್ಳಿಯ ಸೇವನೆ ಹಿತಕರ.
.ನಿತ್ಯ 1 ಲೋಟ ಸಕ್ಕರೆ ರಹಿತ ಜೇನು ಮಿಶ್ರಿತ ಕರಬೂಜದ ಜ್ಯೂಸ್‌ ನೀಡಿರಿ.
. ಒಂದು ಲೋಟ ಬಿಸಿ ನೀರಿನಲ್ಲಿ ಒಂದೆರಡು ಇಂಚು ದಾಲಿcàನಿಯನ್ನು ಹುಡಿ ಮಾಡಿ ಹಾಕಿ. ದಿನಕ್ಕೆ 2 ಬಾರಿ ಅರ್ಧ ಲೋಟದಂತೆ ಈ ನೀರನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸಲು ಕೊಡಿ.
.ಕರಿಬೇವನ್ನು ಮತ್ತು ಹುರುಳಿಯನ್ನು ಹುರಿದು ಹುಡಿ ಮಾಡಿ ಖಾರ ಉಪ್ಪು ಸೇರಿ ಚಟ್ನಿಪುಡಿಯನ್ನು ತಯಾರಿಸಿ. ಇದನ್ನು ನಿತ್ಯ 2-4 ಚಮಚ ಆಹಾರದ ಜೊತೆ ಸೇವಿಸಿ.
. ಅಕ ನೀರಿನ ಸೇವನೆ ಹಿತಕರ. ಬಿಸಿನೀರೂ ಹಿತಕರ.
.ವಿವಿಧ ಬಗೆಯ ಸೊಪ್ಪು, ಹಸಿರು ತರಕಾರಿಯಲ್ಲಿನ ...
Next part ►


This page:




Help/FAQ | Terms | Imprint
Home People Pictures Videos Sites Blogs Chat
Top
.