peperonity.net
Welcome, guest. You are not logged in.
Log in or join for free!
 
Stay logged in
Forgot login details?

Login
Stay logged in

For free!
Get started!

Text page


kannada.info.peperonity.net

ಹೃದಯ ಮುದ್ರೆ ಹಾಗೂ ಸಹಜ ಶಂಖ ಮುದ್ರೆ

ಹೃದಯ ಮುದ್ರೆ
ಈ ಮುದ್ರೆಯು ಅಪಾನ ಮುದ್ರೆ ಮತ್ತು ವಾಯು ಮುದ್ರೆಗಳ ಮಿಶ್ರಣವಾಗಿದೆ. ಅಂದರೆ, ತೋರು ಬೆರಳಿನ ಮೇಲೆ ಹೆಬ್ಬೆರಳನ್ನು ಇಡಬೇಕು ಹಾಗೂ ಮೃದುವಾಗಿ ಒತ್ತಬೇಕು. ನಂತರ ಮಧ್ಯದ ಬೆರಳು ಹಾಗೂ ಉಂಗುರ ಬೆರಳಿನ ತುದಿಯನ್ನು ಹೆಬ್ಬೆರಳಿನ ತುದಿಗೆ ತಾಗಿಸಬೇಕು.

ಪ್ರಯೋಜನ
ಹೃದಯಾಘಾತದ ಸಮಯದಲ್ಲಿ ಈ ಮುದ್ರೆಯನ್ನು ಮಾಡಿದರೆ ಕೂಡಲೇ ಪ್ರಯೋಜನ ದೊರೆಯುತ್ತದೆ. ಅಧಿಕ ರಕ್ತದೊತ್ತಡದ ಸಮಸ್ಯೆಯೂ ಇಲ್ಲವಾಗುತ್ತದೆ.

ಗ್ಯಾಸ್ಟ್ರಿಕ್ ಸಮಸ್ಯೆ, ಮೂಲವ್ಯಾಧಿ, ಅರೆ ತಲೆನೋವಿನಿಂದ ಮುಕ್ತಿ ಪಡೆಯಬಹುದು. ಕೆಲಸದ ಒತ್ತಡದ ವೇಳೆಯಲ್ಲಿ ಅಥವಾ ಮೆಟ್ಟಿಲುಗಳನ್ನು ಏರುವಾಗ, ಬೆಟ್ಟ ಗುಡ್ಡ ಹತ್ತುವ ಸಂದರ್ಭದಲ್ಲಿ ಹೃದಯ ಮುದ್ರೆ ಮಾಡಿ, ಒಂದೆರಡು ನಿಮಿಷ ನಿಂತುಕೊಂಡು ಮತ್ತೆ ಹತ್ತಬೇಕು. ಆಗ ಆಯಾಸ ಪರಿಹಾರವಾಗಿ ದೇಹದಲ್ಲಿ ಚೈತನ್ಯ ಮೂಡುತ್ತದೆ. ಈ ಮುದ್ರೆಯನ್ನು 30 ನಿಮಿಷ ಮಾಡಿದರೆ ಒಳ್ಳೆಯದು.

ಸಹಜ ಶಂಖ ಮುದ್ರೆ
ಈ ಮುದ್ರೆಯಲ್ಲಿ ನಾಡಿಗಳು ಬಲಗೊಳ್ಳುತ್ತವೆ. ಅಭ್ಯಾಸ ಕ್ರಮ: ಎರಡೂ ಕೈ ಬೆರಳುಗಳನ್ನು ಹೆಣೆದು ಹೆಬ್ಬೆಟ್ಟುಗಳನ್ನು ಒಂದಕ್ಕೊಂದು ಜೊತೆಯಾಗಿ ನೇರವಾಗಿಸಿ ಇಡಬೇಕು. (ಚಿತ್ರದಲ್ಲಿ ಇರುವಂತೆ)

ಪ್ರಯೋಜನ
ಈ ಮುದ್ರೆಯಿಂದ ಶರೀರದ ನಾಡಿಗಳು ಬಲಗೊಂಡು, ಸ್ವರ ಮಾಧುರ‌್ಯ ಹೆಚ್ಚುತ್ತದೆ. ಜೀರ್ಣಶಕ್ತಿ ವೃದ್ಧಿಸುತ್ತದೆ. ಸಂತಾನ ಪ್ರಾಪ್ತಿಗೆ ಸಹಕಾರಿ.

ಲೈಂಗಿಕ ಸಮಸ್ಯೆ ನಿಯಂತ್ರಣವಾಗುತ್ತದೆ. ಮೂಲವ್ಯಾಧಿ ತೊಂದರೆ ಹಾಗೂ ತೊದಲು ನಿವಾರಣೆಗೆ ಸಹಕಾರಿ. ಮಾಡಬೇಕಾದ ಅವಧಿ- 10- 15 ನಿಮಿಷ.


This page:




Help/FAQ | Terms | Imprint
Home People Pictures Videos Sites Blogs Chat
Top
.