peperonity.net
Welcome, guest. You are not logged in.
Log in or join for free!
 
Stay logged in
Forgot login details?

Login
Stay logged in

For free!
Get started!

Home page


kannada.jokes.peperonity.net

ಬೆಳಕಿಂಡಿಯಲ್ಲೊಮ್ಮೆ ಇಣಿಕಿ

ಅಲ್ಲೊಂದಿಷ್ಟು ಇಲ್ಲೊಂದಿಷ್ಟು.....

ಜೀವನದಲ್ಲಿ ನಿಮಗೇನು ಬೇಕೋ ಅದು ದೊರೆಯುವುದಿಲ್ಲ (ಪ್ರೀತಿ),
ದೊರೆತಿರುವುದರಿಂದ ಸುಖ ಸಿಗುವುದಿಲ್ಲ (ಮದುವೆ),
ಆ ಸುಖವೂ ಕೇವಲ ತಾತ್ಕಾಲಿಕ (ಗರ್ಲ್‌ಫ್ರೆಂಡ್),
ಇನ್ನು ಶಾಶ್ವತವಾದದ್ದು ಬೋರ್ ಹೊಡೆಸುತ್ತದೆ (ಹೆಂಡತಿ).
``````````
2013ರಲ್ಲಿ ಪ್ರೀತಿಯ ಶ್ರೇಷ್ಠತೆ ಎಂಬುದು
ಸಂಗಾತಿಯ ಮೊಬೈಲ್ ಸಂದೇಶಕ್ಕೆ
ಎಷ್ಟು ತ್ವರಿತವಾಗಿ ಮರು ಉತ್ತರ ನೀಡಲಾಗುತ್ತದೆ
ಎಂಬುದನ್ನೇ ಅವಲಂಬಿಸಿದೆ.
...........
ಹೆಂಡತಿ ಹೇಳಿದ್ದೆಲ್ಲವನ್ನೂ ಮಾಡುವ
ಸ್ವಾತಂತ್ರ್ಯ ಪಡೆದಿರುವ ವ್ಯಕ್ತಿಗೆ
ಗಂಡ ಎಂದು ಹೇಳಬಹುದು.
```````````
ಗುಟ್ಟು ಕಾಪಾಡುವುದರಲ್ಲಿ ಹೆಂಗಸರಿಗಿಂತ ಗಂಡಸರದ್ದೇ ಮೇಲುಗೈ.
ಏಕೆಂದರೆ ಬಹುತೇಕ ಗುಟ್ಟುಗಳು ಅವರಿಗೆ ಸಂಬಂಧಿಸಿದ್ದೇ ಆಗಿರುತ್ತವೆ...
```````````````````
ಬಹಳ ದಪ್ಪಗೆ ಇರುವುದರ ಒಂದು ಲಾಭವೆಂದರೆ
ನೀವು ಅಪಹರಣಕ್ಕೆ ಒಳಗಾಗುವ ಸಾಧ್ಯತೆ ಕಡಿಮೆ.
`````````````````
ದಿನಪತ್ರಿಕೆ ಓದಬೇಕು ಎಂಬ ಆಸಕ್ತಿ ತೀವ್ರವಾಗುವುದು ಯಾವಾಗ?
ಬೇರೆ ಯಾರಾದರೂ ಅದನ್ನು ಓದುತ್ತಿರುವುದನ್ನು ನೋಡಿದಾಗ.
``````````````````
ಪ್ರತಿದಿನ ಸೇಬು ತಿನ್ನುವುದರಿಂದ ಡಾಕ್ಟರನ್ನು ದೂರವಿಡಬಹುದು
ಎಂದಾದರೆ,
ಡಾಕ್ಟರ್ ಪತ್ನಿ ದಿನವೂ ಸೇಬು ಸೇವಿಸಿದರೆ ಏನಾಗಬಹುದು?
```````````````````````````
ನಿನಗಾಗಿ ನರಕಕ್ಕೆ ಹೋಗಲು ಸಿದ್ಧ ಎಂದು ಆತ ಗರ್ಲ್‌ಫ್ರೆಂಡ್‌ಗೆ ಹೇಳಿದ.
ಅದನ್ನು ರುಜುವಾತು ಮಾಡಲು ಆಕೆಯನ್ನು ಮದುವೆಯಾದ!
``````````````````````
ಕೆಲವು ಸ್ನೇಹಿತರು ಫೋನ್ ಬ್ಯಾಟರಿ ಇದ್ದಂತೆ.
ಅತ್ಯವಶ್ಯಕ ಸಮಯದಲ್ಲೇ ಕೈ ಕೊಡುತ್ತಾರೆ.
``````````````````````````
ಭಾರತದಲ್ಲಿ ನಿಮಗೆ ಯಾವುದೇ ವಿಷಯದ ಬಗ್ಗೆ ತುಸುವೇ ಬುದ್ಧಿವಂತಿಕೆ ಇದ್ದರೂ ಸಾಕು.
ನಿಮ್ಮ ತಂದೆ-ತಾಯಿ ಎಂಜಿನಿಯರಿಂಗ್ ಮಾಡು ಅಂತ ದುಂಬಾಲು ಬೀಳುತ್ತಾರೆ.
````````````````````````
ನಾನು ಸುಂದರವಾಗಿ ಕಾಣುವಂತೆ ಮಾಡುವ
ಏನನ್ನಾದರೂ ತನ್ನಿ ಎಂದು ಹೆಂಡತಿ ಆದೇಶಿಸಿದರೆ,
ನೀವು ನಿಮಗಾಗಿ ಒಂದು ವಿಸ್ಕಿ ಬಾಟಲ್ ತಂದುಕೊಳ್ಳಬಹುದು.
``````````````````````````
ನಿಮ್ಮಅಧಿಕಾರ ಎಂಬುದು ಹೆಂಡತಿಯಂತೆ.
ನಾವೇ ಬಯಸಿ ಹತ್ತಿರ ಹೋದರೂ ಕೆಲವೊಮ್ಮೆ ತಪ್ಪಿಸಿಕೊಂಡು ಓಡುತ್ತೆ.
ಇನ್ನು ಕೆಲವೊಮ್ಮೆ ನಾವು ಕರೆಯದೆಯೂ ಅದಾಗಿ ಬಂದು ಅಪ್ಪಿಕೊಳ್ಳುತ್ತೆ.
`````````````````````````````
ನಿಮ್ಮ ಹೆಂಡತಿ,
ಪ್ರತೀ ಮಾತನ್ನೂ ಗಮನವಿಟ್ಟು ಕೇಳಬೇಕೆಂದರೆ
ನಿದ್ದೆಯಲ್ಲಿ ಮಾತಾಡಿ ನೋಡಿ!
`````````````````````
ಸಂತೋಷ ಮತ್ತು ದುಃಖ ಒಟ್ಟಿಗೇ ಆಗುವುದು ಅಂದರೇನು?
ನಿಮ್ಮ ವೈರಿ ಎಂಟನೇ ಮಹಡಿಯಿಂದ ಕೆಳಗೆ ನಿಂತಿದ್ದ
ನಿಮ್ಮ ಹೊಸ ಕಾರಿನ ಮೇಲೆ ಬೀಳುವುದು.
```````````````````````````
ಯಶಸ್ವಿ ದಾಂಪತ್ಯದ ರಹಸ್ಯವೆಂದರೆ
ಗಂಡ-ಹೆಂಡತಿ ಜೊತೆಗೆ ಕುಳಿತು ಎಲ್ಲಾ ವಿಷಯಗಳನ್ನೂ ಚರ್ಚಿಸುವುದು.
ಕೊನೆಗೆ ಹೆಂಡತಿಯ...


This page:




Help/FAQ | Terms | Imprint
Home People Pictures Videos Sites Blogs Chat
Top
.