peperonity.net
Welcome, guest. You are not logged in.
Log in or join for free!
 
Stay logged in
Forgot login details?

Login
Stay logged in

For free!
Get started!

Text page


kannada.jokes.peperonity.net

ಸಣ್ಣಗೆ ಒಮ್ಮೆ ನಕ್ಕು ಬಿಡಿ....

ಕನ್ನಡ ಪ್ರಭ,

ಗಂಡ, ಹೆಂಡತಿ ಜೊತೆಯಲ್ಲಿ ಕುಳಿತು ಕ್ರಿಕೆಟ್ ನೋಡುತ್ತಿರುತ್ತಾರೆ.
ಹೆಂಡತಿ: ಇವ್ನು ಧೋನಿ ಅಲ್ವಾ?
ಗಂಡ: ಅಲ್ಲ, ಲಸಿತ್ ಮಲಿಂಗ. ಧೋನಿ ವಿಕೆಟ್ ಕೀಪರ್ರು..
ಹೆಂಡತಿ: ಅಯ್ಯೋ ಇನ್ನೊಂದು ವಿಕೆಟ್ ಬಿತ್ತು!
ಗಂಡ: ಅದು ರೀಪ್ಲೇ..ಆವಾಗ ಔಟಾಗಿದ್ದನ್ನೇ ಈಗ್ಲೂ ತೋರಿಸ್ತಾ ಇದಾರೆ.
ಹೆಂಡತಿ: ಇಂಡಿಯಾ ಗೆಲ್ಲಬಹುದು ಅಲ್ವಾ?
ಗಂಡ: ಇದು ಆಸ್ಟ್ರೇಲಿಯಾ ಗಡ ಶ್ರೀಲಂಕಾ ಮ್ಯಾಚು. ಇನ್ನು 20 ರನ್ನು ಬೇಕು ಗೆಲ್ಲೋಕೆ.
ಹೆಂಡತಿ: ಒಂದು ಸಿಕ್ಸ್ ಹೊಡೆದರೆ ಗೆಲ್ತಾರೆ ಅಲ್ವಾ?
(ಗಂಡ ಸಿಟ್ಟಿನಿಂದ ಚಾನೆಲ್ ಬದಲಾಯಿಸುತ್ತಾನೆ. ಹೆಂಡತಿ ಸೀರಿಯಲ್ ನೋಡತೊಡಗುತ್ತಾಳೆ)
ಗಂಡ: ಸೀರಿಯಲ್ ಹೆಸರೇನು?
ಹೆಂಡತಿ: ಶ್...ಡಿಸ್ಟರ್ಬ್ ಮಾಡ್ಬೇಡಿ!
................................
........................
.ಗಣಿತದ ಪರೀಕ್ಷೆ ನಡೆದಿತ್ತು. ಪ್ರಶ್ನೆ ಪತ್ರಿಕೆ ಓದಿದ ಮರಿಕೋಲ್ಯ ಇದ್ದಕ್ಕಿದ್ದಂತೆ ಎದ್ದು ಕುಣಿಯತೊಡಗಿದ.
ಮಾಸ್ತರ್(ಗಾಬರಿಯಿಂದ): ಲೇ ಯಾಕ್ಲೇ ಹಿಂಗ ಕುಣೀಲಕತ್ತೀ?
ಮರಿಕೋಲ್ಯ: ಸರ...ನೀವು ಪ್ರಶ್ನೆ ಪತ್ರಿಕೆ ಓದಿಲ್ಲೇನ್ರಿ?
ಮಾಸ್ತರ್: ಲೇ ಮಂಗ್ಯಾನ ಮಗನ! ಏನದ ಲೇ ಅದರಾಗಾ?
ಮರಿಕೋಲ್ಯ: ಪ್ರತೀ Stepಗೂ ಒಂದು ಮಾರ್ಕ್ಸ್ ಅಂತ ಬರದಾರ. ಲೇ ಹುಡುಗರಾ ನೀವೂ ಕುಣೀರಿ, ಮಾರ್ಕ್ಸ್ ಪಡೀರಿ....ಹೊಡೀರೀ ಹಲಗೀ!!
.............
...........
.ಎರಡು ದೆವ್ವಗಳು ಹರಟೆ ಹೊಡೆಯುತ್ತಾ ಕುಳಿತಿದ್ದವು...
ದೆವ್ವ 1: ನೀನು ಹೇಗೆ ಸತ್ತೆ?
ದೆವ್ವ 2: ಫ್ರಿಜ್‌ನಲ್ಲಿ ಕುಳಿತಿದ್ದೆ, ಚಳಿಯಿಂದ ಸತ್ತುಹೋದೆ. ನೀನು?
ದೆವ್ವ 1: ಹೆಂಡತಿ ಮೇಲೆ ಒಂದು ದಿನ ಅನುಮಾನ ಬಂತು. ಇಡೀ ಮನೆಯೆಲ್ಲಾ ಹುಡುಕಾಡಿದೆ. ಆದರೆ ಆಕೆಯ ಪ್ರೇಮಿ ಮಾತ್ರ ಸಿಗಲಿಲ್ಲ...ನೋವು ತಡೆಯಲಾರದೆ ಆತ್ಮಹತ್ಯೆ ಮಾಡಿಕೊಂಡೆ.
ದೆವ್ವ 2: ಫ್ರಿಜ್ ತೆಗೆದು ನೋಡಿದ್ರೆ ಇಬ್ಬರೂ ಬದುಕಬಹುದಾಗಿತ್ತು....
............
............
. ಬಾಟಲ್‌ನಲ್ಲಿ ಶಾಂಪು ಖಾಲಿ ಆದರೂ ಕೂಡ ಅದರಲ್ಲಿ ನೀರು ಹಾಕಿ, ಅಲ್ಲಾಡಿಸಿ, ಎರಡೆರಡು ದಿನ ತಲೆ ತೊಳೆದುಕೊಳ್ಳುತ್ತೀರಿ ಅಂದರೆ...
- ಟೂಥ್ ಪೇಸ್ಟ್ ಖಾಲಿಯಾದರೂ ಟ್ಯೂಬ್ ಅನ್ನು ಹಿಂದಿನಿಂದ ಮಡಚಿ, ಹಿಚುಕಿ, ಕೊನೆಗೆ ಹೊರಗೆ ಏನೂ ಬರದಿದ್ದರೆ ಅದನ್ನು ಹರಿದು, ಅಳಿದುಳಿದ ಪೇಸ್ಟ್‌ಗಾಗಿ ಹುಡುಕುತ್ತೀರೆಂದರೆ...
- ಚಿನ್ನ ತೆಗೆದುಕೊಳ್ಳದಿದ್ದರೂ ಚಿನ್ನದ ಬೆಲೆ ಏರಿದಾಗ ಟೆನ್ಶನ್ ಮಾಡಿಕೊಂಡರೆ...
- ಬ್ಯಾಟರಿ ಹಾಳಾಗಿದೆ ಅಂತ ಗೊತ್ತಿದ್ದರೂ ಅದನ್ನು ಚೇಂಜ್ ಮಾಡದೆ ಟಿ.ವಿ. ರಿಮೋಟನ್ನು ತಟ್ಟುತ್ತಾ ಗೊಣಗುತ್ತೀರೆಂದರೆ....
- ಟೀಶರ್ಟ್ ಹಳೆಯದಾದಾಗ ಅದನ್ನು ನೈಟ್ ಡ್ರೆಸ್‌ನಂತೆ ಬಳಸಿ, ಇನ್ನಷ್ಟು ಹಳೆಯದಾದ ಮೇಲೆ ಹೋಲಿ ಆಡಲು ಹಾಕಿಕೊಂಡು, ನಂತರ ಅದನ್ನು ಮನೆ ಒರೆಸುವ ಬಟ್ಟೆಯಾಗಿ ಬಳುಸುತ್ತೀರೆಂದರೆ...
'ನೀವು ನಿಜವಾದ ಭಾರತೀಯರು!'
............
...........
...........
ಗಂಡ ಹೆಂಡತಿಯ ನಡುವೆ ಭೀಕರ ಕಾಳಗ ನಡೆದಿತ್ತು.
ಹೆಂಡತಿ: ನಾನು ನನ್ನ ಅಮ್ಮನ ಮಾತು ಕೇಳಿದ್ದೇ ಅಂದ್ರೆ ಇನ್ಯಾರನ್ನೋ ಮದುವೆ ಆಗಿ ಖುಷಿಯಾಗಿರ್ತಿದ್ದೆ.
ಗಂಡ: ಏನು ಹಾಗಂದ್ರೆ? ...


This page:




Help/FAQ | Terms | Imprint
Home People Pictures Videos Sites Blogs Chat
Top
.