peperonity.net
Welcome, guest. You are not logged in.
Log in or join for free!
 
Stay logged in
Forgot login details?

Login
Stay logged in

For free!
Get started!

Text page


kannada.jokes.peperonity.net

JOKES IN KANNADA FONT


ವಿದೇಶದಲ್ಲಿ
ಶಿಕ್ಷಣ ಪಡೆದು ಬಂದ ಚಪಾತಿಗೆ
ಪಿಜ್ಜಾ ಎಂದು ಹೆಸರು!

...
ಸಿಟಿಯಲ್ಲಿ
ಹೆಂಡತಿ ಕೈಹಿಡಿದು ನಡೆಯುವುದು
ಪ್ರೀತಿಗಲ್ಲ. ಕೈಬಿಟ್ಟರೆ......
ಶಾಪಿಂಗ್‌ಗೆ ಹೋಗ್ತಾಳೆ ಎಂಬ ಭಯ.

...
ಕ್ರಿಮಿನಲ್ ಆದವನು ತನ್ನ ಜೀವನದಲ್ಲಿ
ಮಾಡುವ ಬಹಳ ದೊಡ್ಡ ತಪ್ಪೆಂದರೆ
ಸಿಕ್ಕಿ ಬೀಳುವುದು.

...
ಕೆಲವರು
ಎಂಥ ಸುಳ್ಳುಗಾರರೆಂದರೆ
ಸುಳ್ಳು ಹೇಳಿ......... ತಮ್ಮನ್ನೇ ನಂಬಿಸಿಕೊಳ್ಳುತ್ತಾರೆ.

...
ವೈದ್ಯರಾಗುವುದಕ್ಕೆ
ಇರಬೇಕಾದ ಪ್ರಾಥಮಿಕ ಅರ್ಹತೆ ಎಂದರೆ
ಔಷಧ ಚೀಟಿಯನ್ನು ಗೊತ್ತಾಗದ ಹಾಗೆ
ಹಾಗೂ ಬಿಲ್ ಅನ್ನು......... ಸ್ಪಷ್ಟವಾಗಿ ಬರೆಯುವ ಕಲೆ ಗೊತ್ತಿರಬೇಕು.

...
ಅನೇಕರು
ಹಣ ಗಳಿಸಲು ಆರೋಗ್ಯ
ಹಾಳು ಮಾಡಿಕೊಳ್ಳುತ್ತಾರೆ. ನಂತರ ಆರೋಗ್ಯ ಸುಧಾರಿಸಿಕೊಳ್ಳಲು......... ಹಣ ಖರ್ಚು ಮಾಡುತ್ತಾರೆ.

...
ಐಫೋನ್
ಎಂಬುದು ಮೊಬೈಲ್ ಜಗತ್ತಿನ
ಸಲ್ಮಾನ್‌ಖಾನ್ ಇದ್ದಂತೆ.
ಬಹಳ ದುಬಾರಿ, ಒಂದೇ ಡಿಸೈನ್,
ಅದೇ ಕಾರ್ಯಶೈಲಿ.
ಆದರೂ ಕಣ್ಮುಚ್ಚಿ............. ಉಘೆ ಅನ್ನುವ ಅಭಿಮಾನಿಗಳು.

...
ಸಂಬಂಧಗಳು ಬೀಜಗಣಿತವಿದ್ದಂತೆ.
ಆಗಾಗ 'ಎಕ್ಸ್‌' ನೆನಪಾಗುತ್ತ
'ವೈ' ಎಂಬ ಪ್ರಶ್ನೆ...... ಏಳುತ್ತಿರುತ್ತದೆ.

...
ಮೈಗಳ್ಳ ತನದ ಪರಮಾವಧಿ ಎಂದರೆ,
ಉತ್ತರ ಪತ್ರಿಕೆಗೆ
ಕಾಪಿ ಚೀಟಿಗಳನ್ನು ಅಂಟಿಸಿ ಬರುವುದು!

...
ಸಿಟ್ಟು ಮಾಡಿಕೊಳ್ಳುವು
ದು ಗಂಡಸಿನ ಗುರುತು. ಗಂಡನ ಗುರುತು?
......... ಸಿಟ್ಟು ನುಂಗಿಕೊಳ್ಳುವುದು!

...
ದುಡ್ಡಿಗಾಗಿ ಮದುವೆ ಆಗಬಾರದು.
ಅದಕ್ಕಿಂತ ಕಡಿಮೆ ಅಪಾಯದಲ್ಲಿ
........ ಸಾಲ ಸಿಗುತ್ತದೆ.

...
ಮನುಷ್ಯ ಕಂಡುಹಿಡಿದ
ಮೊಟ್ಟಮೊದಲ ವೈರ್‌ಲೆಸ್ ಟೆಕ್ನಾಲಜಿಗೆ
...... 'ಫ್ಲೈಯಿಂಗ್ ಕಿಸ್‌' ಎಂದು ಕರೆಯಬಹುದು.

...
ಹುಡುಗಿಯರು ವಾಹನ ಚಲಾಯಿಸುವುದರ
ಸಮಸ್ಯೆ ಎಂದರೆ ಅವರು ಸೈಡ್ ಮಿರರ್
ಎಂಬುದು ಹಿಂದೆ ಬರುತ್ತಿರುವ ವಾಹನಗಳನ್ನು ನೋಡುವುದಕ್ಕಲ್ಲ,
ತಮ್ಮನ್ನೇ ನೋಡಿಕೊಳ್ಳುವುದಕ್ಕೆ..... ಎಂದು ಭಾವಿಸುವುದು.

...
ಒಂದು ಆಫೀಸಿನ ಎಲ್ಲ ಸಿಬ್ಬಂದಿ
ಮೈಮುರಿದು ಚೆನ್ನಾಗಿ ಕೆಲಸ ಮಾಡಿದರೆ,
ಬಾಸ್ ಪ್ರತಿವರ್ಷ
ಹೊಸ ಹೊಸ ದುಬಾರಿ ಕಾರನ್ನು
...... ಖರೀದಿಸಲು ಅನುಕೂಲವಾಗುತ್ತದೆ.

...
ಹುಲಿಯನ್ನು
ನಿಮ್ಮ ಉತ್ತಮ ಸ್ನೇಹಿತ ಎಂದು ಸ್ವೀಕರಿಸಬಹುದು,
............... ಪಂಜರದಲ್ಲಿದ್ದಷ್ಟು ಹೊತ್ತು.

...
ನಾನು ಫೇಸ್‌ಬುಕ್ ಬಿಡುತ್ತೇನೆ
ಎನ್ನುವುದು ಕೋಪಿಸಿಕೊಂಡ ಹುಡುಗ
ಮನೆ ಬಿಡುತ್ತೇನೆ ಎಂದಂತೆ.
ಎಲ್ಲರ ಗಮನ ಸೆಳೆಯುವುದಷ್ಟೇ
ಅಲ್ಲಿರುವ ಉದ್ದೇಶ ಹಾಗೂ ಆ ವ್ಯಕ್ತಿ
ಹಿಂತಿರುಗಿ ಬರುತ್ತಾನೆ ಅಂತ
.......... ಎಲ್ಲರಿಗೂ ಗೊತ್ತಿರುತ್ತದೆ.
ಮದುವೆ ಅಂದರೆ
ವರ್ಕ್‌ಶಾಪ್ ಇದ್ದಂತೆ.
ಗಂಡ ವರ್ಕ್ ಮಾಡುತ್ತಿರುತ್ತಾನೆ
. ಹೆಂಡತಿ...... ಶಾಪ್ ಮಾಡುತ್ತಿರುತ್ತಾಳೆ.

...
ತಮ್ಮ ಬಗ್ಗೆ ಯಾರೂ ಕೇರ್ ಮಾಡುವುದಿಲ್ಲ
ಎಂದು ಯೋಚಿಸುವವರು,
ಎಂದಿಗೂ ಸೈಡ್‌ಸ್ಟ್ಯಾಂಡ್ ತೆಗೆದು
....... ತಮ್ಮ ಬೈಕ್ ಓಡಿಸಿರಲಿಕ್ಕಿಲ್ಲ!

...
...


This page:




Help/FAQ | Terms | Imprint
Home People Pictures Videos Sites Blogs Chat
Top
.